Wednesday, April 12, 2006

ಕೃತಜ್ಞತೆ


ಕನ್ನಡದ ಎಲ್ಲಾ ಬ್ಲಾಗಿಗರಿಗೂ ನಮಸ್ಕಾರ.

ಕನ್ನಡದ ನೆಟ್ ಜಗತ್ತಿನಲ್ಲಿ ಈಚೆಗೆ ಬ್ಲಾಗಿಂಗ್ ನಿಧಾನ ಸಂಚಲನ ಉಂಟು ಮಾಡುತ್ತಿದೆ. ಸಾಹಿತ್ಯ, ಹಾಸ್ಯ, ಶೈಕ್ಷಣಿಕ, ಗಂಭೀರ ಬ್ಲಾಗ್ ನೋಡಿ ಆಸ್ವಾದಿಸಿದ್ದ ನನಗೆ ಇದೀಗ ಈ ಜಗತ್ತಿನಲ್ಲಿ ಪಯಣಿಸುವ ಪಾಸ್ ಸಿಕ್ಕಿದೆ! ಬ್ಲಾಗ್ ಎಂದರೆ ವೆಬ್-ಲಾಗ್ ಎಂದಷ್ಟೇ ಗೊತ್ತಿದ್ದ ನನಗೆ, ಇದರಲ್ಲಿ ಒಂದು ಖಾತೆ ತೆರೆಯಲು ಒತ್ತಾಯಿಸಿದ ಗೆಳೆಯ ವಿಜಯಸಾರಥಿ ಮತ್ತು ನನ್ನದೇ ಬ್ಲಾಗ್ ರಚಿಸುವಲ್ಲಿ ಸಹಕರಿಸಿದ ಮತ್ತೊಬ್ಬ ಗೆಳೆಯ ಅವಿನಾಶ್ ಅವರಿಗೆ ಕೃತಜ್ಞತೆ.

ಜಗತ್ತಿನ ಚಲನವಲನಗಳನ್ನು ವಿಶ್ವಪುಟದಲ್ಲಿ ದಾಖಲಿಸುವ ಉದ್ದೇಶ ನನ್ನದು. ಇದಕ್ಕೆ ನಿಮ್ಮ ಸಲಹೆ-ಸಹಕಾರವೂ ಬೇಕು.

ಸಿರಿಗನ್ನಡಂ ಗೆಲ್ಗೆ.

-ವಿಶ್ವನಾಥ

4 Comments:

At 12:48 PM, April 12, 2006, Blogger Anveshi said...

ಬ್ಲಾಗಿನ ಬ್ಯಾಗಿನಲ್ಲಿ ತೋಚಿದ್ದನ್ನು ಗೀಚಿಡಲು ಮತ್ತು ನನ್ನಂತೆಯೇ ಬೊಗಳೆ ಬಿಡಲು ಬಂದ ನಿಮಗೆ ಸುಸ್ವಾಗತ.
ನಮ್ಮ ಬೆಗಳೂರು ಬ್ಯುರೋ ನಡೆಸಿದ ಸಮಗ್ರ ತನಿಖೆಯಿಂದ ನೀವು ಕೂಡ ಬ್ಲಾಗಿನಲ್ಲಿ ಬೊಗಳೆ ಬಿಡಲು ಸಿದ್ಧರಾಗಿದ್ದೀರೆಂಬ ಅಂಶ ತಿಳಿದುಬಂದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಅದುವರೆಗೆ ತೋಚಿದ್ದನ್ನು ಗೀಚುತ್ತಿರಿ...

 
At 12:58 PM, April 12, 2006, Blogger Sarathy said...

ಅಂತರ್ಜಾಲದ ಹೊಸ ವಿಶ್ವಕ್ಕೆ ಸ್ವಾಗತ. ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬವಾಗಿ ನಿಮ್ಮ ಬರಹಗಳು ಇರಬೇಕೆ ಅಥವಾ ಸಮಾಜದ ಪ್ರತಿಬಿಂಬವಾಗಿ ನಿಮ್ಮ ಬರಹಗಳು ಇರಬೇಕೆ ಎಂಬುದು ನಿಮಗೆ ಬಿಟ್ಟ ವಿಷಯ. ಬೊಗಳೆಗಳನ್ನು ಬಿಡಲು ರಗಳೆ ತೆಗೆಯುತ್ತಿರುವ ಅಸತ್ಯಾನ್ವೇಷಿಯವರ ಅಭಿಪ್ರಾಯವನ್ನು ಅಳವಡಿಸುವುದು ಅಥವಾ 'ಅಲ್ಲ'ಗೊಳಿಸುವುದೂ ನಿಮಗೆ ಬಿಟ್ಟ ವಿಷಯ... ನಿಮ್ಮ ಬ್ಲಾಗಿನ ಬಾಗಿಲಿಗೆ ಬರುವ ಜನಸಂಖ್ಯೆ ಹೆಚ್ಚಾಗಲೀ ಎಂಬುದು ನನ್ನ ಹಾರೈಕೆ...(:+)

 
At 4:24 PM, April 13, 2006, Anonymous Anonymous said...

ಅಂತರ್ಜಾಲದ ಬ್ಲಾಗ್ ಗೆ ಕಾಲಿರಿಸುವ ನಿಮಗೆ ಶುಭಾಶಯಗಳು, ನಿಮ್ಮ ಬ್ಲಾಗ್ ಹೆಚ್ಚು ಪ್ರಗತಿ, ಯಶಸ್ವಿ ಹೊಂದಲಿ ಎಂದು ನಾನು ಆಶಿಸುತ್ತೇನೆ.

 
At 10:44 AM, April 15, 2006, Blogger Vishwanath said...

ಪ್ರಿಯ ಗಿರೀಶ್,
ನಿಮ್ಮ ಅಭಿನಂದನೆ-ಹಾರೈಕೆಗೆ ಧನ್ಯವಾದಗಳು. ನಿಮ್ಮ ವಿಶ್ವಾಸ ಹೀಗೆಯೇ ಇರಲಿ.
-ವಿಶ್ವನಾಥ

 

Post a Comment

<< Home