ನಿಧಾನಾಂಕ!
ತಪ್ಪಿಗೆ ಏನಾದರೊಂದು ಪಿಳ್ಳೆನೆವ ಹುಡುಕುವುದು ಮಾನವ ಸಹಜ ಸ್ವಭಾವ. ನಾನೂ ಒಬ್ಬ ಮನುಷ್ಯ ಪ್ರಾಣಿ ಆಗಿರುವುದರಿಂದ ಇದು ನನಗೂ ಅನ್ವಯಿಸುತ್ತದೆ. ಬರೆಯುವುದನ್ನು ಬಿಟ್ಟು ತುಂಬಾ ದಿನವಾಗಿದ್ದರಿಂದ ಏನಾದರೂ ಬರೆದೇ ತೀರಬೇಕೆಂಬ ಹಠದಿಂದ ಬ್ಲಾಗ್ ಶುರುಮಾಡಿದೆ. ಅದು ತಕ್ಕಮಟ್ಟಿಗೆ ಅಪ್ ಡೇಟ್ ಆಗುತ್ತಿರುವಾಗಲೇ ಮುಂಬೈ ಸ್ಫೋಟದ ಸದ್ದಿಗೆ "ಬ್ಲಾಗ್‌ಸ್ಪಾಟ್ " ತನ್ನ ಕದಮುಚ್ಚಿ "ಬ್ಲಾಕ್‌ಸ್ಪಾಟ್" ಆಯಿತು. ಇದರ ಬೆನ್ನ ಹಿಂದೆಯೇ ನನ್ನ ಬ್ಲಾಗ್ ಕೂಡ ಆಲಸ್ಯ ರೋಗದಿಂದ ಹಾಸಿಗೆ ಹಿಡಿಯಿತು.
ಬ್ಲಾಗ್‌ಸ್ಪಾಟ್ ನ ಬಾಗಿಲು ತೆರೆದರೂ ನನ್ನ ಬ್ಲಾಗ್ ನಿದ್ದೆಯಿಂದ ಏಳಲೇ ಒಲ್ಲದು. ಇದೀಗ ಅದನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಿರುವೆ. ಇಷ್ಟರಲ್ಲೇ ಅದು ಸಂಪೂರ್ಣ ಸುಪ್ತಾವಸ್ಥೆಯಿಂದ ಹೊರಬಂದು ನಿಚ್ಚಳವಾಗಬಹುದು ಎಂದುಕೊಂಡಿದ್ದೇನೆ. ನನ್ನ ಬ್ಲಾಗ್ ಮತ್ತೆ ನಿದ್ದೆಗೆ ಜಾರದಂತೆ- ತೆಲಗಿಗೆ ಮಂಪರು ಪರೀಕ್ಷೆ ಮಾಡಿದ ವೈದ್ಯರು ತಟ್ಟಿ-ತಟ್ಟಿ ಎಚ್ಚರಿಸಿದಂತೆ ನಿಮ್ಮ ಬಡಿತ-ಹೊಡೆತ (ಹಿಟ್ಸ್)ಗಳೂ ತುಂಬಾ ಅವಶ್ಯ.
ಏತನ್ಮಧ್ಯೆ, ತುಂಬಾ ದಿನಗಳಿಂದ ಅಪ್ ಡೇಟ್ ಆಗದ ಬ್ಲಾಗ್ ಬಗ್ಗೆ ಮಾತಿನಲ್ಲೇ ಎಚ್ಚರಿಸಿದ ಗೆಳೆಯರ ಕಾಳಜಿಯೂ ಬ್ಲಾಗ್ ಮತ್ತೆ ಕಣ್ಣು ತೆರೆಯಲು ಕಾರಣ. ಆ ಗೆಳೆಯರಿಗೆ ನಾ ಆಭಾರಿ.
ನಮಸ್ಕಾರ.
-ವಿಶ್ವನಾಥ
3 Comments:
ನನ್ನ ಬ್ಲಾಗ್ ಕೂಡ ತೂಕಡಿಸುತ್ತಲೇ ನಡೆಯುತ್ತಿದೆ. ನಿಮ್ಮ ಬ್ಲಾಗನ್ನೆಚ್ಚೆರಿಸಲು ಹಲವು ವಿಧಾನಗಳಿವೆ ಸ್ವಾಮಿ,ಬ್ಲಾಗಿನ ಮೇಲೆ ತಣ್ಣೀರು ಎರೆಚೋಣವೇ? ಅಥವ ಎದ್ದೇಳು ಮಂಜುನಾಥ (ವಿಶ್ವನಾಥ), ಎದ್ದೇಳು ಎಂದು ಹಾಡು ಹೇಳೋಣವೆ?
Sham Avare,
Namaskara.
Neevu heLidanthe malagiruva blog ge thaneererachi ebbisode olle upaya. Blog ge bheti neediddakke dhanyavaadagalu.
Namaskara.
Vishwanath
ವಿಶ್ವ ಅವರೇ,
ನಿಧಾನಂಕ ಮತ್ತೆ ಮುಂದುವರಿಯುವ ಲಕ್ಷಣ ಕಾಣುತ್ತಿದೆ.
ಅಕ್ಟೋಬರ್ ನಂತರ ಯಾವುದೇ ಹೊಸ ಲೇಖನಗಳಿಲ್ಲ??
Post a Comment
<< Home