Sunday, October 08, 2006

ಅಫ್ಜಲ್‌ಗೆ ಗಲ್ಲು ಶಿಕ್ಷೆ ಬೇಡ



ಹೌದು. ಸಂಸತ್ ಭವನದ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಕುಖ್ಯಾತ ಕಾಶ್ಮೀರಿ ಉಗ್ರಗಾಮಿ ಅಫ್ಜಲ್ ಗುರೂ‌ಗೆ "ಗೌರವಯುತ" ಗಲ್ಲು ಶಿಕ್ಷೆ ಬೇಡ; ಆದರೆ ಆತನನ್ನು ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಬೇಕು!

ವಿಶ್ವದಲ್ಲೇ ಎರಡನೇ ದೊಡ್ಡ ಪ್ರಜಾಪ್ರಭುತ್ವವಿರುವ, ಜನಸಂಖ್ಯೆಯಿರುವ, ನೂರಾರು ಬಾರಿ ಸಂವಿಧಾನ ತಿದ್ದುಪಡಿಯಾಗಿರುವ ನಮ್ಮ ದೇಶದಲ್ಲಿ ನ್ಯಾಯದ ಮನೆಯಿಂದ ರಾಜಾರೋಷವಾಗಿ ತಪ್ಪಿಸಿಕೊಳ್ಳಲು ಅಷ್ಟೇ ಸಹಸ್ರ ದಾರಿಗಳಿವೆ. ಎಂಥ ಭಯಾನಕ ಪಾತಕಗಳನ್ನು ಮಾಡಿದರೂ ಸಲೀಸಾಗಿ ತಪ್ಪಿಸಿಕೊಳ್ಳುವ "ಗಟ್ಟಿ" ಕಾನೂನುಗಳು ನಮ್ಮಲ್ಲಿವೆ. ಪರಿಸ್ಥಿತಿ ಹೀಗಿರುವಾಗ ಅಪರೂಪಕ್ಕೊಮ್ಮೆ ಕುಖ್ಯಾತ ಉಗ್ರಗಾಮಿ ಅಫ್ಜಲ್ ಗುರೂನಂಥವನಿಗೆ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆ ನೀಡಿದ್ದೇ ತಡ, ನಮ್ಮ ದೇಶದಲ್ಲಿ "ಭಯಂಕರ ಸೆಕ್ಯುಲರಿಸಂ" ತಾಂಡವವಾಡುತ್ತಿದೆ.

ಯಾವ ಟಿವಿ ಚಾನೆಲ್ ಅಮುಕಿದರೂ ಅದೇ ಸುದ್ದಿ, ರೇಡಿಯೊ ತಿರುವಿದರೂ ಅದೇ ಚರ್ಚೆ, ಪೇಪರ್ ಹೊರಳಿಸಿದರೂ ಅದೇ ಕಂತೆ ಕಂತೆ ಸುದ್ದಿ, ವಿಮರ್ಶೆ, ಆತ ಸತ್ತರೆ ರಾಷ್ಟ್ರೀಯ ಆಘಾತ ಸಂಭವಿಸಲಿದೆಯೇನೋ ಎಂಬ ಶಂಕೆ, ಜನಾಭಿಪ್ರಾಯ ಸಂಗ್ರಹ....

ನಾನ್‌ಸೆನ್ಸ್.

ಒಂದು ಕ್ರಿಮಿ(ನಲ್) ಬಗ್ಗೆ ಇಷ್ಟೆಲ್ಲ ಚರ್ಚೆಯ ಅಗತ್ಯವಿತ್ತೇ? ಕೇವಲ ಓಟ್‌ಬ್ಯಾಂಕ್ ರಾಜಕೀಯಕ್ಕೆ ನಮ್ಮ ಕಾಂಗ್ರೆಸ್ಸಿಗರು ಹೇಸಿಗೆಯನ್ನೂ ಬಾಯಲ್ಲಿಟ್ಟುಕೊಳ್ಳಲು ಹಿಂಜರಿಯುವುದಿಲ್ಲ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಅಫ್ಜಲ್ ಓರ್ವ ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಆತ ಮಾಡಿದ ತಪ್ಪನ್ನು ಮನ್ನಿಸಬೇಕು, ಆತನಿಗೆ ಕ್ಷಮಾದಾನ ನೀಡಬೇಕು ಎಂದು ರಾಷ್ಟ್ರಪತಿಗಳಿಗೆ ಅಂಗಲಾಚುವ ಕಾಂಗ್ರೆಸ್ ಪುಢಾರಿಗಳಿಗೆ ಸುಪ್ರೀಂ‌ಕೋರ್ಟ್ ನಂಥ ಪರಮೋಚ್ಚ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಎಂಥ ಗೌರವವಿದೆ ಎಂಬುದು ತಿಳಿಯುತ್ತದೆ. 2001ರಲ್ಲಿ ಸಂಸತ್ತಿನ ಉಭಯ ಸದನಗಳ ಅಧಿವೇಶನ ನಡೆಯುತ್ತಿದ್ದಾಗ ಇದೇ ಅಫ್ಜಲ್ ಪಡೆ ದಾಳಿ ಮಾಡಿದಾಗ ನಮ್ಮ ಯೋಧರು ಇವರ ಜೀವಗಳನ್ನು ಉಳಿಸಲು ತಮ್ಮ ಪ್ರಾಣವನ್ನೇ ಬಲಿ ಕೊಟ್ಟರು. ಆಗ ಇದೇ "ಸೆಕ್ಯುಲರ್" ಸಂಸದರು ಸಂಸತ್ತಿನಲ್ಲಿ ತಾವು ಕುಳಿತಲ್ಲೇ ಪ್ಯಾಂಟ್‌ಗಳನ್ನು ಒದ್ದೆ ಮಾಡಿಕೊಂಡಿದ್ದರು. ಆಗ ಎಲ್ಲಿ ಹೋಗಿತ್ತು ಇವರಿಗೆ ಸೆಕ್ಯುಲರಿಸಂ? ಯೋಧರ ಬದಲು ಇವರೇ ಬಂದು ಉಗ್ರರ ಗುಂಡಿಗೆ ತಮ್ಮ ಗುಂಡಿಗೆಯನ್ನೊಡ್ಡಬೇಕಿತ್ತು. ಬೇರೆಯವರ ಮಕ್ಕಳನ್ನು ನೀರಿಗಿಳಿಸಿ ನೀರಿನ ಆಳ ನೋಡುವ ನೀಚ ಬುದ್ಧಿ ನಮ್ಮ ರಾಜಕಾರಣಿಗಳದು.

ಇನ್ನು ಮುಸ್ಲಿಂ ಬಾಂಧವರ ವಿಷಯಕ್ಕೆ ಬರೋಣ.

ಮುಸ್ಲೀಮರು ಎಂದರೆ ಈಗಾಗಲೇ ದೇಶದ್ರೋಹಿಗಳು, ಭಾರತದ ಅನ್ನ ತಿಂದು, ಇಲ್ಲಿನ ಗಾಳಿ ಸೇವಿಸಿ ಪಾಕಿಸ್ತಾನಕ್ಕೆ ಜೈ ಅನ್ನುವವರು ಎಂಬಂಥ ಅಭಿಪ್ರಾಯ ಮನೆ ಮಾಡಿದೆ. ಅಫ್ಜಲ್‌ಗೆ ಕ್ಷಮಾದಾನ ನೀಡಬೇಕು ಎನ್ನುತ್ತಿರುವ ಇವರ ಬಗ್ಗೆ ಜನರಿಗೆ ಯಾವಾಗ ಒಳ್ಳೆಯ ಅಭಿಪ್ರಾಯ ಬರಬೇಕು?

ದೇಶದಲ್ಲಿ ಒಂದೇ ಒಂದು ಮುಸ್ಲಿಂ ಸಂಘಟನೆ ಅಫ್ಜಲ್‌ಗೆ ಮರಣದಂಡನೆಯಾಗಬೇಕು ಎಂದು ಒತ್ತಾಯಿಸಿದ ಸುದ್ದಿಯನ್ನು ನೀವು ಓದಿದ್ದೀರಾ? ಉಗ್ರಗಾಮಿಗೆ, ಕ್ರಿಮಿನಲ್‌ಗೆ, ಕಳ್ಳನಿಗೆ, ದರೋಡೆಕೋರನಿಗೆ ಜಾತಿ, ಮತ, ಧರ್ಮ ಉಂಟೇ? ಮಾನವೀಯತೆಯ ವಿರುದ್ಧ ಅಪರಾಧ ಎಸಗುವ ಇವರಿಗೆ ಮಾನವ ಹಕ್ಕುಗಳ, ಜಾತಿ, ಧರ್ಮದ ಅಂಗಿ ಏಕೆ ತೊಡಿಸುತ್ತೀರಿ ಸಾಬ್? ಕಿತ್ತು-ಬೀಸಾಕಿ ಆ ಬಟ್ಟೆಗಳನ್ನೆಲ್ಲಾ. ಇಂಥವರನ್ನು ನಂಗಾ ಮಾಡಿ ಕೊಂದು ಬಿಡಬೇಕು. ಹಾಗಾದಾಗ ಮಾತ್ರ ಇನ್ನೊಬ್ಬ ಅಫ್ಜಲ್ ಹುಟ್ಟಲು ಸಾಧ್ಯವಿಲ್ಲ.

ತುತ್ತು ಅನ್ನಕ್ಕೂ ತತ್ವಾರ ಬಂದೀತು:

ಕಾಶ್ಮೀರದ ಮುಸಲ್ಮಾನರು ಭಾರತದ ಮುಖ್ಯವಾಹಿನಿಯಲ್ಲಿ ಬರಲು ಇಷ್ಟಪಡುವುದಿಲ್ಲ ಎಂದು ಕಾಣುತ್ತದೆ. ರಕ್ತ-ಸಿಕ್ತ ರಾಜಕೀಯ ಇತಿಹಾಸ ಹೊಂದಿರುವ ಪಾಕಿಸ್ತಾನದ ಜೊತೆಗೇ ಗುರುತಿಸಿಕೊಳ್ಳಲು ಅವರಿಗೆ ಇನ್ನಿಲ್ಲದ ಆಸಕ್ತಿ. ಆ ದೇಶಕ್ಕೆ ಹೋದರೆ ಅಲ್ಲಿನ ದಿವಾಳಿಯೆದ್ದ ಆರ್ಥಿಕ ಪರಿಸ್ಥಿತಿಯಿಂದಾಗಿ ಇವರಿಗೆ ತುತ್ತು ಅನ್ನಕ್ಕೂ ತತ್ವಾರವಾದೀತು. ಯಾರು ಹೇಳಬೇಕು ಇವರಿಗೆ ಬುದ್ದಿಯನ್ನ?

"ಅಫ್ಜಲ್ ಪ್ರಾಣ ಉಳಿಯಬೇಕು ಇಲ್ಲದಿದ್ದರೆ ಕಾಶ್ಮೀರ ಕೊಳ್ಳ ಹೊತ್ತಿ ಉರಿದು ಹೋದೀತು" ಎಂದು ಎದೆ-ಎದೆ ಬಡಿದುಕೊಂಡು ಹರತಾಳ ನಡೆಸುವ ಇವರು, ಇದೇ ಕೊಳ್ಳದಲ್ಲಿ ನಿರಂತರವಾಗಿ ಅಲ್ಪಸಂಖ್ಯಾತ ಬಡ ಹಿಂದೂಗಳನ್ನು ಸಾಲು ಸಾಲಾಗಿ ನಿಲ್ಲಿಸಿ ಉಗ್ರಗಾಮಿಗಳು ಕೊಲ್ಲುವಾಗ ಎಲ್ಲಿ ಹೋಗಿರುತ್ತಾರೆ? ಏಕೆಂದರೆ ಆಗ ಸತ್ತವರು ಕೆಲಸಕ್ಕೆ ಬಾರದ ಹಿಂದೂಗಳು. ಈಗ ಸಾಯಲಿರುವವನು ಅವರನ್ನು ಕೊಂದವನು!

ಅಫ್ಜಲ್‌ನ ಮಗ ಡಾಕ್ಟರನಾಗಬೇಕಂತೆ, ಆತ ಡಾಕ್ಟರಾಗಬೇಕಾದರೆ ಆತನ ಅಪ್ಪ ಜೀವಸಹಿತ ಉಳಿಯಬೇಕಂತೆ. ಹೇಗಿದೆ ಅಫ್ಜಲನ ಹೆಂಡತಿಯ ವಾದ? ತನ್ನ ಹೆಂಡತಿ ಮಕ್ಕಳು ಚೆನ್ನಾಗಿರಬೇಕು ಎಂದು ಬಯಸಿದ ಅಫ್ಜಲ್ ಏಕೆ ಅಮಾಯಕರನ್ನು ನಿರ್ದಯವಾಗಿ ಕೊಲ್ಲುವ ಉಗ್ರಗಾಮಿಯಾದ ಎಂಬ ಬಗ್ಗೆ ಮಾತ್ರ ಆಕೆ ಬಾಯಿ ಬಿಡುವುದಿಲ್ಲ.

ಕಾಶ್ಮೀರ ಕೊಳ್ಳದಲ್ಲಿ ಉಗ್ರರ ಅಟ್ಟಹಾಸಕ್ಕೆ ಸತ್ತ ಹಿಂದೂ ನವ ವಧೂವರರು, ಮದುವೆ ದಿಬ್ಬಣದಲ್ಲಿ ಪಾಲ್ಗೊಂಡ ಅಮಾಯಕ ಬಂಧುಗಳು ಇವರಿಗೆಲ್ಲ ಸಂಬಂಧಿಕರಿರಲಿಲ್ಲವೇ. ಹಸೆಮಣೆ ಏರಬೇಕಾದವರನ್ನು ಮಸಣಕ್ಕೆ ಅಟ್ಟಿದ ಇವರನ್ನು ಅಲ್ಲಾ ಕ್ಷಮಿಸಿಯಾನೆ?

ಮೀಡಿಯಾ ಹೈಪ್:

ಬಹುತೇಕ ಎಲ್ಲಾ ಮಾಧ್ಯಮಗಳು ಅದರಲ್ಲೂ ವಿಶೇಷವಾಗಿ ಇಂಗ್ಲಿಷ್ ಮಾಧ್ಯಮಗಳು ಅಫ್ಜಲ್ ನ ಹೆಂಡತಿ-ತಾಯಿಯ ವಿಶೇಷ ಸಂದರ್ಶನ, ರಾಷ್ಟ್ರಪತಿ ಭೇಟಿಯ ಸುದ್ದಿ-ಚಿತ್ರಗಳನ್ನು ಮುಖಪುಟದಲ್ಲಿ, ಮುಖ್ಯ ಕಾರ್ಯಕ್ರಮದಲ್ಲಿ ಪ್ರಕಟಿಸಿ-ಪ್ರಸಾರ ಮಾಡಿ ಧನ್ಯವಾಗಿವೆ. ಸ್ವತಃ ಅಫ್ಜಲ್‌ನೇ ತನಗೆ ಕ್ಷಮಾದಾನ ಬೇಡ ಎಂದಾಗ, ನಮ್ಮ ಸಂವಿಧಾನದಲ್ಲಿನ 72 ಮತ್ತು 161 ನೇ ವಿಧಿ(ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಕ್ಷಮಾದಾನ ನೀಡುವ ಹಕ್ಕು)ಯನ್ವಯ ಆತನಿಗೆ ಕ್ಷಮಾದಾನ ನೀಡಬೇಕು ಎಂದು ಸುಪ್ರೀಂಕೋರ್ಟ್ ತೀರ್ಪಿನ ದಾರಿಯನ್ನೇ ಯಶಸ್ವಿಯಾಗಿ ತಪ್ಪಿಸುವ ಕೆಲಸ ನಡೆಯುತ್ತಿದೆ.

ಗುಜರಾತಿನಲ್ಲಿ ಹಿಂದೂಗಳಿದ್ದ ರೇಲ್ವೆ ಬೋಗಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ಆದರೆ ಮಾಧ್ಯಮದಲ್ಲಿ ಪದೇ ಪದೇ ವರದಿಯಾಗುವುದು ನಂತರದ ಗಲಭೆಗಳಿಗೇ. ಹಿಂದೂಗಳು ಗಲಭೆ ಮಾಡಿದರೆ ಸರಿ ಎನ್ನುವುದು ಇದರ ಉದ್ದೇಶವಲ್ಲ, ಆದರೆ ಪ್ರತಿಕ್ರಿಯೆಗೆ ಕಾರಣವಾದ ಮೂಲ ಕ್ರಿಯೆ ಬಗ್ಗೆ ಏಕೀ ನಿರ್ಲಕ್ಷ್ಯ? ಏಕೆಂದರೆ ಹಿಂದೂಗಳು ನರ ಸತ್ತವರು, ಅವರನ್ನು ಸಾಮೂಹಿಕವಾಗಿ ಕೊಂದು ಹಾಕಿದರೂ ನಮ್ಮ ಮಹಾನ್ ಪ್ರಜಾಪ್ರಭುತ್ವದಲ್ಲಿ ಅಲ್ಪಸಂಖ್ಯಾತ ಎಂಬ ಲೇಬಲ್ ಅಡಿಯಲ್ಲಿ ಸುರಕ್ಷಿತವಾಗಿರಬಹುದು ಎಂಬ ಉಡಾಫೆಯೇ ಇಂಥ ಅವಗಢಗಳಿಗೆಲ್ಲ ಕಾರಣ.

ಈ ಹಿಂದಿನ ಕೇಂದ್ರದ ಎನ್‌ಡಿಎ ಸರಕಾರ ಉಗ್ರಗಾಮಿಗಳ ವಿರುದ್ಧ ಕಠೋರ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಟಾಡಾ ಕಾಯ್ಜೆ ಜಾರಿಗೆ ತಂದಿತ್ತು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದ್ದೇ ತಡ ಅದನ್ನು ಹೊಸಕಿ ಹಾಕಿಬಿಟ್ಟಿತು. ಏಕೆಂದರೆ ಅಂಥ ಕಾಯ್ದೆಯಿದ್ದರೆ ಅಫ್ಜಲನಂಥವರನ್ನು ಉಳಿಸಲು ಸಾಧ್ಯವಿಲ್ಲ! ದೇಶದಲ್ಲಿ ಈ ವರೆಗೆ ಸಂಭವಿಸಿದ ಬಾಂಬ್ ಸ್ಫೋಟ, ಭಯೋತ್ಪಾದನೆಗಳಂಥ ಹೀನ ಕೃತ್ಯಗಳಲ್ಲಿ ಭಾಗಿಯಾದವರು ಯಾವ ಸಮುದಾಯದವರು? ಕೇವಲ ಓಟ್ ಬ್ಯಾಂಕ್ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಅಂಥವರಿಗೆ ಅನುಕೂಲವಾಗುವ ಕಾನೂನುಗಳನ್ನು ತರುತ್ತದಷ್ಟೇ ಅಲ್ಲ, ಈಗಿನ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ತೀರ್ಪಿಗೆ ಸೆಡ್ಡು ಹೊಡೆದು ರಾಷ್ಟ್ರಪತಿಯೆಂಬ ರಬ್ಬರ್ ಸ್ಟಾಂಪ್ ಮೂಲಕ ತನ್ನ ತೆವಲನ್ನು ತೀರಿಸಿಕೊಳ್ಳುತ್ತಿದೆ.

ಭೀಕರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿ ನೂರಾರು ಅಮಾಯಕರನ್ನು ಬಲಿತೆಗೆದುಕೊಂಡ ದಾವೂದ್ ಇಬ್ರಾಹಿಂ‌ನನ್ನು ನಮ್ಮ ಪೊಲೀಸರು ಸೆರೆಹಿಡಿದು ತಂದು ನ್ಯಾಯಾಲಯದ ಮೂಲಕ ಶಿಕ್ಷೆ ಕೊಡಿಸಿದರೆ, ನಾಳೆ ಇದೇ ಕಾಂಗ್ರೆಸ್ಸಿಗರು "ಈತ ನಮ್ಮ ಮುಸ್ಲಿಂ ಭಾಯ್ ಕ್ಷಮಿಸಿಬಿಡಿ ಇವನನ್ನ" ಎಂದು ಹೇಳಿದರೂ ಅಚ್ಚರಿ ಪಡಬೇಕಿಲ್ಲ.

1976ರಲ್ಲಿ ಕಾಂಗ್ರೆಸ್ ಪಕ್ಷದ ಧೀಮಂತ ನಾಯಕಿ ಶ್ರೀಮತಿ ಇಂದಿರಾ ಗಾಂಧಿ ಅವರು ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸುವ ಮೂಲಕ ನ್ಯಾಯಾಂಗಕ್ಕೆ, ಪ್ರಜಾಪ್ರಭುತ್ವಕ್ಕೆ ಎಕ್ಕಡದಿಂದ ಹೊಡೆಯುವ ಪರಿಪಾಠವನ್ನು ಪಕ್ಷದಲ್ಲಿ ಬಿಟ್ಟು ಹೋಗಿದ್ದಾರೆ. ಅದೇ ಪರಿಪಾಠವನ್ನು ಮನಮೋಹನ್ ಸಿಂಗ್ ರಂಥ ಅತ್ಯುನ್ನತ ಶಿಕ್ಷಣ ಪಡೆದ, ಸಂಭಾವಿತ "ಕಾಂಗ್ರೆಸ್ ಪಕ್ಷದ" ಪ್ರಧಾನಿಗಳು ಶಿರಸಾವಹಿಸಿ ಪಾಲಿಸುತ್ತಿದ್ದಾರೆ.

ಹಾಗಿದ್ದರೆ ನಮ್ಮ ದೇಶಕ್ಕೆ ಪ್ರಜಾಪ್ರಭುತ್ವ, ನ್ಯಾಯಾಂಗ ವ್ಯವಸ್ಥೆ ಏಕೆ ಬೇಕು? ಕಾಂಗ್ರೆಸ್ ಪಕ್ಷ ಒಂದೇ ಸಾಕು!

8 Comments:

At 9:35 AM, October 10, 2006, Anonymous Anonymous said...

ಅತ್ಯ್ತುತ್ತಮ ಲೇಖನ!

 
At 11:58 AM, October 11, 2006, Blogger naxalnext said...

yes boss
hats up for U

 
At 8:21 PM, October 12, 2006, Blogger Vishwanath said...

ಗಾಮಿನಿಯವರೇ,

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

ನಮಸ್ಕಾರ,

-ವಿಶ್ವನಾಥ.

 
At 8:21 PM, October 12, 2006, Blogger Vishwanath said...

ಪ್ರಿಯ ನಕ್ಸಲ್,

ಮೆಚ್ಚುಗೆಗೆ ಧನ್ಯವಾದಗಳು. ಅಫ್ಜಲ್‌ಗೆ ನೀಡಿದ ಮರಣ ದಂಡನೆಯನ್ನು ಬೆಂಬಲಿಸಿದಷ್ಟೇ, ನಕ್ಸಲೀಯರ ಹಿಂಸಾತ್ಮಕ ಹೋರಾಟವನ್ನೂ ನಾನು ವಿರೋಧಿಸುತ್ತೇನೆ.

ನಮಸ್ಕಾರ,

-ವಿಶ್ವನಾಥ

 
At 12:57 PM, November 02, 2006, Blogger Shiv said...

ವಿಶ್ವನಾಥರೇ,
ವಸ್ತುಸ್ಥಿತಿಯನ್ನು ಅತ್ಯಂತ ನಿಖರವಾಗಿ ಲೇಖನದಲ್ಲಿ ಸೆರೆಹಿಡಿದಿದ್ದೀರಾ.ಪೊಳ್ಳು ಸೆಕ್ಯುಲಿರಿಸ್ಮ್, ಓಟ್ ಬ್ಯಾಂಕ್ ರಾಜಕಾರಣ,ಮತಾಂಧತೆ...ಇವೆಲ್ಲದರ ಒಟ್ಟು ಮೊತ್ತವೇ ಈ ಪ್ರಕರಣ..

 
At 7:16 PM, November 28, 2006, Blogger Kesari said...

ನಮಸ್ಕಾರ,
ಮುಸ್ಲಿಂ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ www.news.faithfreedom.org ನಲ್ಲಿರುವ ಪುಟಗಳನ್ನೊಮ್ಮೆ ಓದಿ ನೋಡಿ. ಅಲ್ಲಿ ಭಾರತವನ್ನು ಜಾತ್ಯಾತೀತ ರಾಷ್ಟ್ರ ಎನ್ನುವ ಬದಲು Dhimmi ರಾಷ್ಟ್ರ ಏಕೆ ಏನ್ನುತ್ತಾರೆ ಎಂಬುದು ತಿಳಿಯಬೇಕಾದರೆ www.hinduwisdom.info ದಲ್ಲಿನ ಪುಟಗಳಲ್ಲಿ ರಾಜಕೀಯ ಸಂಬಂಧಿಸಿದ ಬರಹಗಳನ್ನು ಓದಿ. ನನ್ನ ಬ್ಲಾಗಿಗೂ ಭೇಟಿ ನೀಡಿ comments ಕೊಡ್ತಾ ಹೋಗಿ.
ಧನ್ಯವಾದಗಳು

 
At 8:07 PM, October 09, 2008, Anonymous Anonymous said...

ಪ್ರಿಯ ನಾಥರೇ. ಇದನ್ನು ತಪ್ಪದೆ ನೋಡಿ,
"http://www.youtube.com/watch?v=mfnTl_Fwvbo"
ಇದರಲ್ಲಿ ಇರುವ ಬಾಬು ಬಜರಂಗಿಗೆ ಯಾವ ಸಿಕ್ಷೆ?

 
At 8:09 PM, October 09, 2008, Anonymous Anonymous said...

ಪ್ರಿಯ ನಾಥರೇ. ಇದನ್ನು ತಪ್ಪದೆ ನೋಡಿ,
"http://www.youtube.com/watch?v=_DRS0WyGJVo"
ಇದರಲ್ಲಿ ಇರುವ ರಮೇಶ್ ದಾವೆಗೆ ಯಾವ ಸಿಕ್ಷೆ?

 

Post a Comment

<< Home